ಬೆಂಗಳೂರು, ಸೆ. 24 (DaijiworldNews/MB) : ರೈತರನ್ನೇ ಅಂತರರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರ ಮಾರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ ಅವರು, ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರವಾಗಿ ಬಿಟ್ಟಿದೆ. ಈ ಸರ್ಕಾರ ರೈತರ ಭೂಮಿ ಮಾತ್ರವಲ್ಲದೇ ರೈತರನ್ನೇ ಅಂತರರಾಷ್ಟ್ರೀಯ ಕಂಪನಿಗಳಿಗೆ ಮಾರುತ್ತಿದೆ ಎಂದು ದೂರಿದರು.
ಈ ಸರ್ಕಾರ ಅಧಿವೇಶನದಲ್ಲಿ ಅನೇಕ ವಿಚಾರಗಳ ಚರ್ಚೆಗೆ ಅವಕಾಶ ನೀಡಿಲ್ಲ. ನಾವು ಸರ್ಕಾರಕ್ಕೆ 1700 ಪ್ರಶ್ನೆ ಕೇಳಿದ್ದೆವು. ಆದರೆ ಸರ್ಕಾರ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಿಲ್ಲ. ಚರ್ಚೆ ನಡೆಸಲು ಅವಕಾಶ ಕೊಡದೆ ವಿಶ್ವಾಸವನ್ನೇ ಕಳೆದುಕೊಂಡ ಸರ್ಕಾರ ಇದಾಗಿದೆ ಎಂದು ಟೀಕೆ ಮಾಡಿದರು.
ಇದು ಹೊಡೆದಾಟದ ಸರ್ಕಾರ ಎಂದು ದೂರಿರುವ ಡಿಕೆಶಿ ಬಿಜೆಪಿ ಸರ್ಕಾರದಲ್ಲಿ ಯಾರನ್ನು ಮೇಲಕ್ಕೆ ಏರಿಸಬೇಕು, ಯಾರನ್ನು ಇಳಿಸಬೇಕು ಎಂಬ ಹೊಡೆದಾಟ ನಡೆಯುತ್ತಿದೆ ಎಂದು ಆರೋಪಿಸಿದರು.