ಬೆಂಗಳೂರು, ಸೆ. 24 (DaijiworldNews/MB) : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಡ್ರಗ್ಸ್ ದಂಧೆ ಆರೋಪದಲ್ಲಿ ಈಗಾಗಲೇ ವಿಚಾರಣೆ ಎದುರಿಸಿದ್ದ ಆರೋಪಿ ಪ್ರತಿಷ್ಠಿತ ರೆಸಾರ್ಟ್ವೊಂದರ ಮಾಲೀಕ ಕಾರ್ತಿಕ್ ರಾಜುನನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.
ಪ್ರತಿಷ್ಠಿತ ರೆಸಾರ್ಟ್ವೊಂದರ ಮಾಲೀಕರಾಗಿರುವ ಕಾರ್ತಿಕ್ ಅವರ ರೆಸಾರ್ಟ್ನಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿದ್ದವು ಎನ್ನಲಾಗಿದ್ದು ಪ್ರಸ್ತುತ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಕಾರ್ತಿಕ್ ವಿಚಾರಣೆ ನಡೆಸಲಾಗುತ್ತಿದೆ.
ಕಾರ್ತಿಕ್ ಡ್ರಗ್ಸ್ ಪಾರ್ಟಿ ಮಾಡಿರುವ ಬಗ್ಗೆ ವಿಚಾರಣೆ ಸಂದರ್ಭ ತಿಳಿಸಿದ ಹಿನ್ನೆಲೆ ಕಾರ್ತಿಕ್ನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಇನ್ನು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೈಲಿನಲ್ಲಿದ್ದು ನಟ ದಿಗಂತ್, ಐಂದ್ರಿತಾ ವಿಚಾರಣೆ ನಡೆಸಲಾಗಿದೆ.