ಹೊಸದಿಲ್ಲಿ, ಸೆ. 24(DaijiworldNews/HR): ಜೆಎನ್ ಯು ಮಾಜಿ ವಿದ್ಯಾರ್ಥಿ ಹಾಗೂ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರನ್ನು ದಿಲ್ಲಿ ನ್ಯಾಯಾಲಯವು ಅಕ್ಟೋಬರ್ 22ರ ವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಡಿ ಖಾಲಿದ್ ನನ್ನು ಬಂಧಿಸಲಾಗಿತ್ತು.
ಸೆಪ್ಟಂಬರ್ 11 ರಂದು ಉಮರ್ ಖಾಲಿದ್ ನನ್ನು ಸುಮಾರು 11 ಗಂಟೆಗಳ ವಿಚಾರಣೆಯ ಬಳಿಕ ದಿಲ್ಲಿಯ ಪೊಲೀಸ್ ಸ್ಪೆಷಲ್ ಸೆಲ್ ಬಂಧಿಸಿತ್ತು.
ಇನ್ನು ಈತನನ್ನು ಹಿಂಸಾಚಾರದಲ್ಲಿ ಭಾಗಿಯಾದ ಪ್ರಮುಖ ಸಂಚುಕೋರರಲ್ಲಿ ಒಬ್ಬನೆಂದು ಆರೋಪಿಸಲಾಗಿದ್ದು, ಕೊಲೆ, ಕೊಲೆಯತ್ನ, ದೇಶದ್ರೋಹ ಹಾಗೂ ಭಾರತೀಯ ದಂಡ ಸಂಹಿತೆಯ ವಿಭಾಗಗಳಡಿ ಖಾಲಿದ್ ಮೇಲೆ ಪ್ರಕರಣ ದಾಖಲಿಸಲಾಗಿದೆ.