ದೆಹಲಿ, ಸೆ. 24(DaijiworldNews/HR): ಕೃಷಿ ರಂಗದ ಸುಧಾರಣೆಗೆ ಮನಮೋಹನ್ ಸಿಂಗ್ ಮತ್ತು ಅಂದಿನ ಕೃಷಿ ಸಚಿವ ಶರದ್ ಪವಾರ್ ಮುಂದಾಗಿದ್ದರಾದರೂ,, ಆದರೆ ಕೆಲ ಶಕ್ತಿಗಳು ಬಿಡದ ಕಾರಣ ಯುಪಿಎ ಇಂಥ ಸುಧಾರಣೆಗೆ ಧೈರ್ಯ ತೋರಿರಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ನಾತನಾಡಿದ ತೋಮರ್, ಕ್ರ್ಇಷಿ ಮಸೂದೆಯನ್ನು ತಮ್ಮ ಅವಧಿಯಲ್ಲಿ ಜಾರಿಗೆ ತರಲಾಗಲಿಲ್ಲ ಎಂಬ ಕಾರಣಕ್ಕೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಮನಮೋಹನ್ ಸಿಂಗ್ ಮತ್ತು ಅಂದಿನ ಕೃಷಿ ಸಚಿವ ಶರದ್ ಪವಾರ್ ಅವರು ಕೃಷಿ ಕ್ಷೇತ್ರದ ಸುಧಾರಣೆಗೆ ಮುಂದಾಗಿದ್ದರು. ಆದರೆ, ಕೆಲ ಮಂದಿಯ ಒತ್ತಡಗಳಿಂದಾಗಿ ಯುಪಿಎ ಈ ಸುಧಾರಣೆಗೆ ಧೈರ್ಯ ತೋರಿರಲಿಲ್ಲ,' ಎಂದು ಹೇಳಿದ್ದಾರೆ.
ಇನ್ನು ಈ ನೂತನ ಕೃಷಿ ಕಾಯ್ದೆಯು ರೈತರನ್ನು ಎಪಿಎಂಸಿಯ ಸಂಕೋಲೆಗಳಿಂದ ಬಿಡಿಸಲಿದ್ದು,ಬಿತ್ತನೆಯ ಅವಧಿಯಲ್ಲೇ ರೈತರಿಗೆ ಬೆಲೆ ಖಾತರಿ ಸಿಗಲಿದೆ. ಈ ಕಾಯ್ದೆಯನ್ನು ಜಾರಿಗೆ ಬರಲು ಬಿಡಿ ಎಂದು ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಈ ಕಾಯ್ದೆ ರೈತರ ಬದುಕಿನಲ್ಲಿ ಬದಲಾವಣೆ ತರಲಿದೆ ಎಂಬುದಾಗಿ ಹೇಳಿದ್ದಾರೆ.