ಬೆಂಗಳೂರು, ಸೆ 24(DaijiworldNews/PY): ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಯನ್ನು ಸೆ.28ಕ್ಕೆ ಮುಂದೂಡಿದೆ.
ಎನ್ಡಿಪಿಎಸ್ ವಿಶೇಷ ನ್ಯಾಯಾಲಯವು ಸಂಜನಾ ಪರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಸಿಸಿಬಿ ಪೊಲೀಸರ ಪರ ವಕೀಲರ ಆಕ್ಷೇಪಣೆಯನ್ನೂ ಕೂಡಾ ದಾಖಲಿಸಿಕೊಂಡಿದೆ. ಅಲ್ಲದೇ, ಪ್ರಕರಣದ ತನಿಖಾಧಿಕಾರಿಯು 20ಕ್ಕೂ ಅಧಿಕ ಪುಟಗಳ ಆಕ್ಷೇಪಣೆಯನ್ನು ನ್ಯಾಯಾಲಕ್ಕೆ ನೀಡಿದ್ದಾರೆ.
ನ್ಯಾಯಾಲಯವು ಇದನ್ನು ಪರಿಶೀಲನೆ ಮಾಡಿದ್ದು, ಸೆ.28ಕ್ಕೆ ಜಾಮೀನು ಅರ್ಜಿಯನ್ನು ಮುಂದೂಡಿದೆ.
ಈ ಹಿಂದೆಯೂ ಕೂಡಾ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಲಯ ಸೆ.24ಕ್ಕೆ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದ್ದು, ಇದೀಗ ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿಯನ್ನು ಸೆ.28ಕ್ಕೆ ಮುಂದೂಡಿದೆ.