ಬೆಂಗಳೂರು, ಸೆ 25(DaijiworldNews/PY): ರಾಜ್ಯದಲ್ಲಿರುವ 5,800 ಗ್ರಾಮ ಪಂಚಾಯತ್ಗಳಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಪಡಿಸಲು ಯಾವುದೇ ರೀತಿಯಾದ ತೊಂದರೆಯಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಮುಖ್ಯ ನ್ಯಾಯಮೂತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠವು, ಮೇ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ವಿಧಾನ ಪರಿಷತ್ತಿನ ಸದಸ್ಯ ಕೆ.ಸಿ. ಕೊಂಡಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿತು.
ಆಗಸ್ಟ್ ತಿಂಗಳಿನಲ್ಲಿ ಅಂತಿಮ ಮತದಾರರ ಪಟ್ಟಿ ಹಾಗೂ ಮೀಸಲಾತಿಯ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಚುನಾವಣೆಯ ದಿನಾಂಕ ನಿಗದಿ ಮಾಡುವ ಮೊದಲು ಪೂರ್ವ ತಯಾರಿಗೆ ಸಮಯದ ಅಗತ್ಯವಿದೆ ಎಂದು ಆಯೋಗ ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈಗಾಗಲೇ ಸಮಯ ಮೀರಿದೆ ಎಂಉ ಹೇಳಿದೆ.
ಚುನಾವಣೆ ನಡೆಸಲು ಆಯೋಗ 250 ಕೋಟಿ ರೂ.ಗಳನ್ನು ಆಯೋಗ ಕೇಳಿದ್ದು, ಈ ಪೈಕಿ ಹಣಕಾಸು ಇಲಾಖೆ 125 ಕೋಟಿ.ರೂ.ನೀಡಲು ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಚುನಾವಣೆ ನಡೆಸಲು ಅಗತ್ಯ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ.