ನವದೆಹಲಿ,ಸೆ.26 (DaijiworldNews/HR): ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು, 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬಿರ್ಲಾ, ಕೇಂದ್ರದ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಂಗವಾಗಿ ಪ್ರಸ್ತುತ ಇರುವ 93 ವರ್ಷಗಳ ಹಳೆಯ ಸಂಸತ್ ಕಟ್ಟಡದ ಎದುರು 13 ಎಕರೆ ಜಾಗದಲ್ಲಿ ಬರಲಿದೆ, ಸಚಿವಾಲಯ ಮತ್ತು ಭದ್ರತಾ ಸಿಬ್ಬಂದಿಗೆ ಸ್ವಾಗತ ಬ್ಯಾರಕ್ಗಳ ಮನೆಗಳು ಹಾಗೂ ಸಣ್ಣ ನರ್ಸರಿಯೊಂದು ಇರಲಿದ್ದು, ಒಟ್ಟಾರೇಯಾಗಿ 892 ಕೋಟಿ ರೂಪಾಯಿಯನ್ನು ನೂತನ ಕಟ್ಟಡ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದರು.
ಇನ್ನು ಸೆಪ್ಟಂಬರ್ ತಿಂಗಳ ಆರಂಭದಲ್ಲಿ ಟಾಟಾ ಪ್ರಾಜೆಕ್ಟ್ ಹೊಸ ಕಟ್ಟಡ ನಿರ್ಮಾಣದ ಟೆಂಡರ್ ಪಡೆದುಕೊಂಡಿತು. ಕೊರೊನಾ ಸಂದರ್ಭದಲ್ಲಿ ಹಣವನ್ನು ನೂತನ ಸಂಸತ್ ಭವನಕ್ಕಾಗಿ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್, ಎನ್ ಸಿಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತಿತರ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.