ಬೆಂಗಳೂರು, ಸೆ.26 (DaijiworldNews/HR): ಸ್ಯಾಂಡಲ್ ವುಡ್ ಡ್ರಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ನಟಿ ಸಂಜನಾ ಡ್ರಗ್ ರಾಕೆಟ್ ನಲ್ಲಿ ನಾನು ಒಂದು ಭಾಗವಾಗಿದ್ದು ಎಂದು ಕೊನೆಗೂ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಸಂಜನಾ ಆರೋಪಿಯಾಗಿದ್ದು, ಜಾಮೀನು ನೀಡದಂತೆ ಸಿಸಿಬಿ ಆಕ್ಷೇಪ ವ್ಯಕ್ತ ಪಡಿಸಿದೆ, ಸ್ಟಾರ್ ಹೋಟೆಲ್, ಫಾರ್ಮ್ ಹೌಸ್ ಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಸಂಜನಾ ಭಾಗಿಯಾಗುತ್ತಿದ್ದು, ಮುಂಬಯಿ, ಪಂಜಾಬ್, ಆಂಧ್ರ ಪ್ರದೇಶ, ಗೋವಾ,ಹಾಗೂ ವಿದೇಶಗಳಿಂದಲೂ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದರು.
ನಟಿಗೆ ತಮ್ಮ ತಪ್ಪಿನ ಬಗ್ಗೆ ಅರಿವಿದ್ದರೂ ಕೂಡ ದಂಧೆಯಲ್ಲಿ ಭಾಗಿಯಾಗಿದ್ದರು, ಪಾರ್ಟಿಗೆ ಬರುತ್ತಿದ್ದ ನಟಿ ಶ್ರೀಮಂತರನ್ನು ಆಕರ್ಷಿಸಿ ಅವರಿಗೆ ಡ್ರಗ್ಸ್ ಖರೀದಿಸುವಂತೆ ಮತ್ತು ಸೇವಿಸುವಂತೆ ಪ್ರಚೋದಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಸಲ್ಲಿಸಲಾಗಿದೆ.
ಇನ್ನು ವಿಚಾರಣೆಯ ವೇಳೆ ಸಂಜನಾ ಎಲ್ಲಾ ತಪ್ಪುಳನ್ನು ಒಪ್ಪಿಕೊಂಡಿದ್ದು, ಡ್ರಗ್ಸ್ ಖರೀದಿಲ್ಲಿ ತನ್ನ ಪಾತ್ರದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾಳೆ. ದೇಶ ವಿದೇಶಗಳ ಡ್ರಗ್ ಪೆಡ್ಲರ್ ಗಳ ಜೊತೆ ನೇರವಾಗಿ ಸಂಪರ್ಕ ಹೊಂದಿದ್ದಾಗಿ ಪ್ರಾಸಿಕ್ಯೂಷನ್ ತಿಳಿಸಿದೆ.