ಮುಂಬೈ, ಸೆ 26(DaijiworldNews/PY): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಶನಿವಾರ ಎನ್ಸಿಬಿ ಮುಂದೆ ಹಾಜರಾಗಿದ್ದಾರೆ.
ದೀಪಿಕಾ ಪಡುಕೋಣೆ ಅವರನ್ನು ಎನ್ಸಿಬಿ ಶುಕ್ರವಾರ ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಆದರೆ, ವಿಚಾರಣೆಗೆ ಶನಿವಾರ ಹಾಜರಾಗುವುದಾಗಿ ಹೇಳಿದ್ದರು. ಹಾಗಾಗಿ ಇಂದು ದೀಪಿಕಾ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಅವರು ಡ್ರಗ್ಸ್ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್ ಆಪ್ ಗ್ರೂಪ್ಗೆ ದೀಪಿಕಾ ಅವರೇ ಅಡ್ಮಿನ್ ಆಗಿದ್ದರು ಎನ್ನಲಾಗುತ್ತಿದೆ. ಜಯಾ ಸಹಾ ಎನ್ನುವವರು ಈ ಗ್ರೂಪ್ ಮಾಡಿದ್ದು, ಈ ಗ್ರೂಪ್ನಲ್ಲಿ ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಅವರೂ ಕೂಡಾ ಆಡ್ಮಿನ್ ಆಗಿದ್ದರು ಎನ್ನಲಾಗುತ್ತಿದೆ.
2017ರಲ್ಲಿ ಈ ವಾಟ್ಸ್ ಆಪ್ ಗ್ರೂಪ್ನಲ್ಲಿ ನಡೆದಿರುವ ಚಾಟ್ವೊಂದರಲ್ಲಿ ದೀಪಿಕಾ ಮಾಲ್ಗಾಗಿ ಬೇಡಿಕೆ ಇಟ್ಟಿದ್ದು, ಗಾಂಜಾ ಅಲ್ಲ ಹಶೀಸ್ ಬೇಕು ಎಂದ ಚಾಟ್ ಬಹಿರಂಗವಾಗಿದೆ. ಈ ಹಿನ್ನೆಲೆ ದೀಪಿಕಾ ಪಡುಕೋಣೆ ಅವರಿಗೆ ಎನ್ಸಿಬಿ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ.