ಭುವನೇಶ್ವರ, ಸೆ 26(DaijiworldNews/PY): ಒಡಿಶಾದ ಸಂಗೀತ ಪ್ರಿಯರ ಬಹುಕಾಲದ ಕನಸನ್ನು ಈಡೇರಿಸಲು ಒಡಿಸ್ಸಿ ಶಾಸ್ತ್ರೀಯ ಸಂಗೀತಕ್ಕೆ ಸ್ಥಾನಮಾನವನ್ನು ನೀಡುವ ಬಗ್ಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಶುಕ್ರವಾರ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಒಡಿಸ್ಸಿ ಸಂಗೀತವು ತನ್ನದೇ ಆದ ಪ್ರಮುಖ ರಾಗ ಹೊಂದಿದೆ ಎಂದು ನವೀನ್ ತಿಳಿಸಿದ್ದಾರೆ.
ಒಡಿಸ್ಸಿ ಸಂಗೀತವು ಕ್ರಿ.ಪೂ ಎರಡನೇ ಶತಮಾನದಷ್ಟು ಹಳೆಯದಾಗಿದೆ. ಇದನ್ನು ಕೇಂದ್ರ ಶಾಸ್ತ್ರೀಯ ಸಂಗೀತವೆಂದು ಇನ್ನೂ ಗುರುತಿಸಿಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಿಂತಲೂ ಒಡಿಸ್ಸಿ ಸಂಗೀತ ಹಿಂದೂಸ್ತಾನಿ ಭಿನ್ನವಾಗಿದೆ ಎಂದು ಮುಖ್ಯಮಂತ್ರಿ ಅವರು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಸಿದ್ದಾರೆ.
ಒಡಿಸ್ಸಿ ಸಂಗೀತಕ್ಕೆ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಕ್ರಮಕೈಗೊಂಡಿದೆ. ಅಲ್ಲದೇ ಈ ಹಿಂದೆಯೇ ಉತ್ಕಲ್ ಸಾಂಸ್ಕೃತಿಕ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದೆ ಎಂದು ತಿಳಿಸಿದ್ದಾರೆ.