ಚೆನ್ನೈ, ಸೆ 26(DaijiworldNews/PY): ತಮಿಳುನಾಡಿನ ತಿರುವಳ್ಳೂರ್ನ ತಾಮರೈಪಕ್ಕಂನಲ್ಲಿರುವ ರೆಡ್ ಹಿಲ್ಸ್ನ ಫಾರ್ಮ್ಹೌಸ್ನಲ್ಲಿ ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತಿಮ ವಿಧಿ-ವಿಧಾನಗಳು ನಡೆಯಿತು.
ಎಸ್ಪಿಬಿ ಅವರ ಅಂತಿಮ ವಿಧಿ-ವಿಧಾನಗಳು ಜರಗುವ ಮುನ್ನ ಅಭಿಮಾನಿಗಳು ಸೇರಿದಂತೆ ಪ್ರಮುಖರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇನ್ನು ಎಸ್ಪಿಬಿ ಅವರ ಅಂತಿಮ ದರ್ಶನಕ್ಕೆ ನಿಬಂಧನೆಗಳು ಇದ್ದರೂ ಕೂಡಾ ಪ್ರಮುಖ ವ್ಯಕ್ತಿಗಳು ಸೇರಿದಂತೆ ಹಲವಾರು ಮಂದಿ ಫಾರ್ಮ್ಹೌಸ್ ಬಳಿ ನೆರೆದಿದ್ದರು.
ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್ ಸೇರಿದಂತೆ ಹಲವಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದ್ದು, ಎಸ್ಪಿಬಿ ಪುತ್ರ ಚರಣ್ ನಡೆಸಿಕೊಡಲಿದ್ದಾರೆ.