ಮಥುರಾ, ಸೆ 26(DaijiworldNews/PY): ಕೃಷ್ಣ ಜನ್ಮಭೂಮಿ ಪ್ರದೇಶವು ಹಿಂದೂಗಳಿಗೆ ಸೇರಿದ್ದು ಎಂದು ವಕೀಲ ವಿಷ್ಣು ಜೈನ್ ಎನ್ನುವವರು ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
ಕೃಷ್ಣ ಜನ್ಮಭೂಮಿ ಜಮೀನಿನ ಸಂಪೂರ್ಣ 13.37 ಎಕರೆ ಭೂಮಿಯು ಹಿಂದೂಗಳಿಗೆ ಸೇರಿದ್ದು, ಕೃಷ್ಣ ಜನ್ಮಭೂಮಿಯ ಪಕ್ಕಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಕೃಷ್ಣನ ಜನ್ಮಸ್ಥಳವನ್ನು ಕತ್ರಾ ಕೇಶವ್ ದೇವ್ ಎಂದು ಗುರುತಿಸಲಾಗಿತ್ತು ಎಂದು ವಿವರಿಸಿರುವ ಅವರು, ಆ ಸ್ಥಳ ಇದೀಗ ಈದ್ಗಾ ಮಸೀದಿ ಟ್ರಸ್ಟ್ನ ನಿರ್ವಹಣಾ ಸಮಿತಿ ರಚನೆ ಮಾಡಿರುವ ಸಂರಚನೆಯಡಿ ಇದೆ ಎಂದಿದ್ದಾರೆ.
ಮುಘಲ್ ಚಕ್ರವರ್ತಿ ಔರಂಗಜೇಬ್ ಹಿಂದೂ ಧಾರ್ಮಿಕ ಸ್ಥಳ ಸೇರಿದಂತೆ ದೇವಾಲಯಗಳನ್ನು ಕೆಡವಲು ಆದೇಶ ನೀಡಿದ್ದ. ಹಾಗಾಗಿ ಕೃಷ್ಣ ಜನ್ಮಭೂಮಿಯಲ್ಲಿದ್ದ ದೇವಾಲಯವನ್ನು ನೆಲಸಮಗೊಳಿಸಿದ್ದ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.