ಬೆಂಗಳೂರು, ಸೆ 26(DaijiworldNews/PY): ಹಸಿರು ಶಾಲು ಹೊದ್ದು ತಮ್ಮದು ರೈತ ಪರ ಸರ್ಕಾರ ಎಂಬ ಸಿಎಂ ಬಿಎಸ್ವೈ ಅವರ ಮಾತು ಕೇವಲ ಬೂಟಾಟಿಕೆಯಷ್ಟೆ. ರಿಯಲ್ ಎಸ್ಟೇಟ್ ಪ್ರಾಯೋಜಿತ ಸರ್ಕಾರದ ಅಸಲಿ ಬಣ್ಣ ಇಂದು ಬಟಾ ಬಯಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತರ ಭಾರೀ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಮಸೂದೆ ಹೊರಡಿಸಿದೆ. ಹಸಿರು ಶಾಲು ಹೊದ್ದು ತಮ್ಮದು ರೈತ ಪರ ಸರ್ಕಾರ ಎಂಬ ಸಿಎಂ ಬಿಎಸ್ವೈ ಅವರ ಮಾತು ಕೇವಲ ಬೂಟಾಟಿಕೆಯಷ್ಟೆ. ರಿಯಲ್ ಎಸ್ಟೇಟ್ ಪ್ರಾಯೋಜಿತ ಸರ್ಕಾರದ ಅಸಲಿ ಬಣ್ಣ ಇಂದು ಬಟಾ ಬಯಲಾಗಿದೆ!!" ಎಂದಿದ್ದಾರೆ.
"ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಮಸೂದೆಗಳನ್ನು ಪ್ರತಿಭಟಿಸಿ ನಡೆಯುತ್ತಿರುವ 'ಐಕ್ಯ ಹೋರಾಟ'ಕ್ಕೆ ನನ್ನ ಬೆಂಬಲವಿದೆ.ಕಾರ್ಪೋರೇಟ್ ಲಾಬಿಗೆ ಮಣಿದಿರುವ ಸರ್ಕಾರಗಳು ರೈತರು ಮತ್ತು ದುಡಿಯುವ ವರ್ಗವನ್ನೇ ನಾಶ ಮಾಡಲು ಹೊರಟಿವೆ. ಕಾರ್ಪೊರೇಟ್ ಗುಲಾಮರಂತೆ ವರ್ತಿಸುತ್ತಿರುವ ಸರ್ಕಾರಗಳು, ತಪ್ಪಿಗೆ ಪ್ರಾಯಶ್ಚಿತ್ತ ಪಡುವ ಕಾಲ ದೂರವಿಲ್ಲ" ಎಂದು ಈ ಹಿಂದೆ ಮಾಡಿದ್ದ ಟ್ವೀಟ್ನಲ್ಲಿ ತಿಳಿಸಿದ್ದರು.