ನವದೆಹಲಿ, ಸೆ 26(DaijiworldNews/PY): ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಶನಿವಾರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರೊಂದಿಗೆ ಶನಿವಾರ ವರ್ಚುವಲ್ ಸಭೆ ನಡೆಸಿದರು.
ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಪೂರ್ಣವಾಗಿ ಅನುಷ್ಠಾನಗೊಳಸುವ ಬಗ್ಗೆ ಒತ್ತಿ ಹೇಳಿದರು. ಶಾಂತಿ ಹಾಗೂ ಸಾಮರಸ್ಯದ ಪ್ರಕ್ರಿಯೆಗೆ ಇದು ಅವಶ್ಯವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವರ್ಚುವಲ್ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಆಡಳಿತರೂಢ ಪಕ್ಷವು ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಕಾರಣ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗಲು ಇದು ನೆರವಾಗಲಿದೆ. ಭಾರತ ಹಾಗೂ ಶ್ರೀಲಂಕಾ ಮಧ್ಯೆ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಮಗೆ ಅವಕಾಶ ಒದಗಿದೆ. ಎಂದು ಹೇಳಿದರು.
ಭಾರತವು, ಶ್ರೀಲಂಕಾದೊಂದಿಗಿನ ಸಂಬಂಧ ವೃದ್ದಿಗೆ ಪ್ರಾಶಸ್ತ್ಯ ನೀಡಲಿದೆ. ಈ ವೇಳೆ ಸಾಗರ್ ಯೋಜನೆಯ ಬಗೆಗಿಜ ನೀತಿಯನ್ನು ತಿಳಿಸಿದ್ದಾರೆ.
ಆ. 9ರಂದು ಶ್ರೀಲಂಕಾದ ಪ್ರಧಾನಿಯಾಗಿ ರಾಜಪಕ್ಸ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.