ನವದೆಹಲಿ, ಸೆ 26(DaijiworldNews/PY): ಕೇಂದ್ರ ಸರ್ಕಾರವು ಸಂಸತ್ನಲ್ಲಿ ಅಂಗೀರಿಸಿರುವ ಹೊಸ ಮಸೂದೆಗಳು ಕಾರ್ಮಿಕರ ಭದ್ರತೆಗೆ ವಿರುದ್ದವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಮಾತನಾಡಿದ ಅವರು, ಹೊಸ ಮಸೂದೆಗಳಿಂದ ಉದ್ಯಮ ಮಾಡುವುದು ಸರಳವಾಗಿದೆ ಎನ್ನುವ ವಿಚಾರ ಸತ್ಯವಲ್ಲ ಎಂದಿದ್ದಾರೆ.
ಈ ಕಾನೂನಿನ ಮುಖೇನ ಟ್ರೇಡ್ ಯೂನಿಯನ್ಗಳನ್ನು ದುರ್ಬಲ ಪಡಿಸಲಾಗಿದೆ. ಈ ಮಸೂದೆಗಳು ಕಾರ್ಮಿಕರ ಭದ್ರತೆಗೆ ವಿರುದ್ದವಾಗಿದೆ. ಕಾನೂನಿನ ಮುಖಾಂತರ ಕೇಂದ್ರವು ರಾಜ್ಯಸರ್ಕಾರಗಳ ಅಧಿಕಾರವನ್ನು ಕಸಿದುಕೊಂಡಿದೆ. ಪ್ರಧಾನಿ ಮೋದಿ ಸರ್ಕಾರ ಕಾರ್ಪೋರೇಟರ್ಗಳಿಗೆ ಮಾತ್ರವೇ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ.