ಬೆಂಗಳೂರು, ಸೆ. 26 (DaijiworldNews/MB) : ಕಾಂಗ್ರೆಸ್-ಜೆಡಿಎಸ್ ಸದಸ್ಯರ ಭಾರೀ ವಿರೋಧ ಹಾಗೂ ಸಭಾತ್ಯಾಗದ ಮಾಡಿದ್ದು ಈ ನಡುವೆ ವಿವಾದಿತ 2020ನೆ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ಮಾಡಲಾಗಿದೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಭೋಜನ ವಿರಾಮದ ಬಳಿಕ ಈ ವಿಧೇಯಕವನ್ನು ಮಂಡಿಸಿದರು.
ಈ ವಿಧೇಯಕದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಈ ತಿದ್ದುಪಡಿಯನ್ನು ರಾಜ್ಯಕ್ಕೆ ಬೇಕಾಗಿ ಅಥವಾ ಜನ ಹಾಗೂ ರೈತರ ಒತ್ತಾಯದಿಂದ ಮಾಡಿಲ್ಲ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿಯಿಂದ ಬಂದ ಪತ್ರದ ಆಧಾರದಲ್ಲಿ ಮಾಡಲಾಗಿದೆ. ಹಳೇ ಕಾಯ್ದೆ ಪ್ರಕಾರ ರೈತರು ಬೆಳೆದ ಬೆಳೆಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಾಗಿತ್ತು , ಖರೀದಿ ಮಾಡುವವರು ಅನುಮತಿ ಪಡೆಯಬೇಕಿದೆ ಎಂದಿದೆ. ಆದರೆ ಇದಕ್ಕೆ ತಿದ್ದುಪಡಿ ತರುವ ಮೂಲದ ರೈತ ವಿರೋಧಿಯಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.