ನವದೆಹಲಿ, ಸೆ. 26 (DaijiworldNews/MB) : ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಭಾಷಣ ಮಾಡಿದ್ದು ವಿಶ್ವಸಂಸ್ಥೆಯ ನಿರ್ಣಯ ಮಂಡಳಿಯಿಂದ ಭಾರತ ಇನ್ನೆಷ್ಟು ದಿನ ಹೊರಗುಳಿಯಲಿದೆ? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಐತಿಹಾಸಿಕ 75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನ ನಡೆಯುತ್ತಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳ ನಾಯಕರು ವರ್ಚುವಲ್ ಆಗಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವರ್ಚುವಲ್ ಭಾಷಣದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು.
ಭಾರತದ ಜನರು ಸುಧಾರಣಾ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಾಣವುದೇ ಎಂಬ ಕಳಕಳಿ ಹೊಂದಿದ್ದು ವಿಶ್ವಸಂಸ್ಥೆಯ ನಿರ್ಣಯ ಮಂಡಳಿಯಿಂದ ಭಾರತ ಇನ್ನೆಷ್ಟು ದಿನ ಹೊರಗುಳಿಯಲಿದೆ? ಎಂದು ಪ್ರಶ್ನಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ (ಶಾಶ್ವತವಲ್ಲದ) ರಾಷ್ಟ್ರವಾಗಿ ಭಾರತವು ಸಮ್ಮಾನ್ (ಗೌರವ), ಸಂವಾದ, ಸಹಯೋಗ, ಶಾಂತಿ ಹಾಗೂ ಸಮೃದ್ಧಿ '5 ಎಸ್' ಕಡೆಗೆ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.