ಛಂಡೀಗಡ, ಸೆ 27(DaijiworldNews/PY): ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದ ಶಿರೋಮಣಿ ಅಕಾಲಿಕದಳ (ಎಸ್ಎಡಿ) ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರಕ್ಕೆ ಬರಲು ತೀರ್ಮಾನಿಸಿದೆ.
ಬಿಜೆಪಿ ಸರ್ಕಾರದ ವಿವಾದಿತ ಮೂರು ಮಸೂದೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಸೆ.17ರಂದು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೂರು ಗಂಟೆಗಳ ಕಾಲ ನಡೆದ ಪಕ್ಷದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಎಂಎಸ್ಪಿಯಲ್ಲಿ ರೈತರ ಬೆಳೆಗಳ ಮಾರಾಟವನ್ನು ರಕ್ಷಿಸಲು ಶಾಸನಬದ್ದ ಶಾಸಕಾಂಗ ಭರವಸೆ ನೀಡಲು ಕೇಂದ್ರದ ಮೊಂಡುತನದ ನಿರಾಕರಣೆ ಹಾಗೂ ಪಂಜಾಬಿ ಹಾಗೂ ಸಿಖ್ ಸಮಸ್ಯೆಗಳಿಗೆ ಯಾವುದೇ ರೀತಿಯಾದ ಸ್ಪಂದನೇ ನೀಡದೇ ನಿರ್ಲಕ್ಷ್ಯ ತೋರಿದ್ದರಿಂದ ಕ್ಷ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಯಿಂದ ಹೊರಬರಲು ಸರ್ವಾನುಮತದಿಂದ ತೀರ್ಮಾನ ಮಾಡಿದ್ದೇವೆ ಎಂದು ಎಸ್ಡಿಪಿ ತಿಳಿಸಿದೆ.
ಕೃಷಿ ಮಸೂದೆಗಳ ಸರ್ಕಾರದ ತೀರ್ಮಾನಕ್ಕೆ ಕೇವಲ ರೈತರಷ್ಟೇ ಮಾತ್ರವಲ್ಲದೇ, ವ್ಯಾಪಾರಿಗಳ ಹಿತಾಕ್ತಿಗೆ ಹಾನಿಕಾರಕವಾಗಿದೆ ಎಂದು ಎಸ್ಡಿಎ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.