ಮುಂಬೈ, ಸೆ 27(DaijiworldNews/PY): ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಹಾಗೂ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಎನ್ಸಿಬಿ ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಅವರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಶನಿವಾರ ಬೆಳಗ್ಗೆ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಅವರು ಎನ್ಸಿಬಿ ವಿಚಾರಣೆಗೆ ಹಾಜರಾಗಿದ್ದು, ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಶುಕ್ರವಾರದಂದು ದೀಪಿಕಾ ಅವರ ಉದ್ಯಮ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರನ್ನು ಕೂಡಾ ಎನ್ಸಿಬಿ ತಂಡ ವಿಚಾರಣೆ ನಡೆಸಿತ್ತು.
ದೀಪಿಕಾ ಪಡುಕೋಣೆ ಮಾತ್ರವಲ್ಲದೇ ನಟಿಯರಾದ ಶ್ರದ್ದಾ ಕಪೂರ್ ಹಾಗೂ ಸಾರಾ ಅಲಿಖಾನ್ ಕೂಡಾ ಎನ್ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭ ಸಾರಾ ಅಲಿಖಾನ್ ಅವರ ಮೊಬೈಲ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸೆ.23ರಂದು ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೀಪಿಕಾ ಪಡುಕೋಣೆ ಸೆರಿದಂತೆ ಶ್ರದ್ದಾ ಕಪೂರ್ ಸಾರಾ ಅಲಿಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ಎನ್ಸಿಬಿ ಸಮನ್ಸ್ ನೀಡಿತ್ತು.