ನವದೆಹಲಿ, ಸೆ. 27 (DaijiworldNews/HR): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಬಿಜೆಪಿ ನಾಯಕಿ ಉಮಾ ಭಾರತಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಉಮಾ ಭಾರತಿ, ನನಗೆ ಕೊರೊನಾ ಪಾಸಿಟಿವ್ ಬಮ್ದಿದ್ದು, ಈ ಹಿನ್ನಲೆಯಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಮ್ದವರೆಲ್ಲ ಕೋವಿಡ್ ಪರೀಕ್ಷೆಯನ್ನು ಮಾಡಬೇಕೆಂದು ಮನವಿ ಮಾಡುತ್ತೇನೆ. ಕಳೆದ ಮೂರು ದಿನಗಳಿಂದ ಅವರು ಲಘು ಜ್ವರದಿಂದ ಬಳಲುತ್ತಿದ್ದರು ಮತ್ತು ಎಲ್ಲಾ ಕೋವಿಡ್ ಸಲಹೆಗಳನ್ನು ಅನುಸರಿಸಿದ್ದರೂ ಕೂಡ ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
'ಹರಿದ್ವಾರ ಮತ್ತು ಋಷಿಕೇಶ್ ನಡುವೆ ಇರುವ ವಂದೇ ಮಾತರಂ ಕುಂಜ್ ನಲ್ಲಿ ನಾನು ಐಸಲೊಟ್ ಆಗಿದ್ದೇನೆ. ನಾಲ್ಕು ದಿನಗಳ ನಂತರ ಮತ್ತೊಂದು ಕೋವಿಡ್ ಪರೀಕ್ಷೆಯನ್ನು ಪಡೆಯುತ್ತೇನೆ ಮತ್ತು ಪರಿಸ್ಥಿತಿ ಹಾಗೇ ಇದ್ದರೆ ವೈದ್ಯರನ್ನು ಸಂಪರ್ಕಿಸುತ್ತೇನೆ' ಎಂದು ಉಮಾ ಭಾರತಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.