ಬೆಂಗಳೂರು, ಸೆ 27(DaijiworldNews/PY): ಕರ್ನಾಟಕ ಕೈಗಾರಿಕೆ ವಿವಾದಗಳು ಸೇರಿದಂತೆ ಇತರ ಕಾನೂನುಗಳ ತಿದ್ದುಪಡಿ-2020ಕ್ಕೆ ವಿಧಾನ ಪರಿಷತ್ನಲ್ಲಿ ಸೋಲಾಗಿದ್ದು, ಇದರಿಂದ ಸರ್ಕಾರಕ್ಕೆ ಮುಖಭಂಗವಾಗಿದೆ.
ಈ ವಿಧೇಯಕಗಳಿಗೆ ಕೂಡಾ ಅನುಮೋದನೆ ನೀಡುವಂತೆ ಆಡಳಿತ ಪಕ್ಷದ ಸದಸ್ಯರು ಮನವಿ ಮಾಡಿದ್ದಾರೆ. ಆದರೆ, ಈ ವೇಳೆ ಪ್ರತಿ ಪಕ್ಷಗಳು ಕೆಲವು ತಿದ್ದುಪಡಿಗಳನ್ನು ಮುಂದಿಟ್ಟಿದ್ದಾರೆ.
ಇನ್ನು ಪ್ರತಿ ಪಕ್ಷಗಳು, ವಿಧೇಯಗಳ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಲು ಸೆಲೆಕ್ಟಿವ್ ಕಮಿಟಿಗೆ ನೀಡುವಂತೆ ಒತ್ತಾಯ ಮಾಡಿದರು. ಆದರೆ, ಈ ವಿಚಾರವಾಗಿ ಸಭಾಪತಿ ಒಪ್ಪಿಗೆ ನೀಡಲಿಲ್ಲ. ಬಳಿಕ ಪ್ರತಿ ಪಕ್ಷ ಮತಕ್ಕೆ ಹಾಕುವಂತೆ ಒತ್ತಾಯಿಸಿದ್ದು, ಸಭಾಪತಿಗಳು ಮತ ವಿಭಜನೆ ಪ್ರತಿಕ್ರಿಯೆ ಪ್ರಾರಂಭ ಮಾಡಿದರು. ಈ ಸಂದರ್ಭ ವಿಧೇಯಕದ ಪರವಾಗಿ ಮತ ಬಂದರೆ, ವಿರುದ್ದವಾಗಿ 26 ಮತಗಳು ಬಂದಿದ್ದು, ವಿಧೇಯಕವು 12 ಮತಗಳಿಂದ ಸೋಲನುಭವಿಸಿತು.