ಬೆಂಗಳೂರು, ಸೆ. 27 (DaijiworldNews/MB) : ಕೊರೊನಾ ಸೋಂಕು ಪ್ರಮಾಣ ಏರಿಕೆಯ ಈ ಸಂದರ್ಭದಲ್ಲಿ ಶಾಲೆಯನ್ನು ಆರಂಭ ಮಾಡುವ ಕುರಿತಾಗಿ ಸೂಚನೆ, ಸಲಹೆಯನ್ನು ನೀಡಲು ಎಲ್ಲಾ ಸಚಿವರು ಹಾಗೂ ಶಾಸಕರುಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಕೊರೊನಾ ಕಾರಣದಿಂದಾಗಿ ಕಳೆದ ಮಾರ್ಚ್ನಲ್ಲಿ ಮುಚ್ಚಲಾಗಿರುವ ಶಾಲೆಗಳನ್ನು ಇನ್ನು ಕೂಡಾ ತೆರೆಯಲು ಸಾಧ್ಯವಾಗಿಲ್ಲ. ಜೂನ್ನಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದರೆ ಇನ್ನೂ ಕೂಡಾ ಎಲ್ಲಾ ಚಟುವಟಿಕಗಳ ಆರಂಭಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಹಲವು ಸಾಮಾಜಿಕ ಪಿಡುಗುಗಳು ಕೂಡಾ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಶಾಲೆಗಳನ್ನಯ ಆರಂಭಿಸಬಹುದೆ, ಆರಂಭ ಮಾಡುವುದಾದರೆ ಯಾವ ತರಗತಿಗಳನ್ನು ಮೊದಲು ಆರಂಭಿಸಬೇಕು ಎಂಬುದಾಗಿ ಸಚಿವರು, ಶಾಸಕರಿಗೆ ಪತ್ರ ಬರೆದು ಸಲಹೆ ಕೋರಿದ್ದಾರೆ.
ಹಾಗೆಯೇ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ಆದರೆ ಸಾಮಾಜಿಕ ಜೀವನ ಹತೋಟಿಗೆ ಬರಬೇಕಾಗಿದೆ. ಈ ಸಂದರ್ಭದಲ್ಲಿ ಬಹಳ ಸಂಕಷ್ಟಕಕ್ಕೆ ಸಿಲುಕಿರುವುದು ಶಿಕ್ಷಣ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ.