ನವದೆಹಲಿ, ಸೆ. 27 (DaijiworldNews/MB) : ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರ ಬಂದ ಬಳಿಕವೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು, ಶಿವಸೇನೆ ಹಾಗೂ ಅಕಾಲಿದಳ ಇಲ್ಲದೆ ಎನ್ಡಿಎ ಇರುವುದಿಲ್ಲ ಎಂದು ಹೇಳಿದ್ದಾರೆ.
ಕೃಷಿ ಮಸೂದೆಯನ್ನು ವಿರೋಧಿಸಿ ಶನಿವಾರ ಎನ್ಡಿಎ ಜತೆಗಿನ ಮೈತ್ರಿ ತೊರೆಯುವು ತೀರ್ಮಾನದ ಬಗ್ಗೆ ಶಿರೋಮಣಿ ಅಕಾಲಿದಳ ಪ್ರಕಟಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ಎನ್ಡಿಎಯ ಪ್ರಬಲ ಆಧಾರಸ್ತಂಭಳಾಗಿ ಶಿವಸೇನೆ ಮತ್ತು ಅಕಾಲಿದಳ ಇದ್ದವು. ಇನ್ನು ಇವೆರಡು ಪಕ್ಷಗಳು ಇಲ್ಲದೆ ಎನ್ಡಿಎ ಇರುವುದಿಲ್ಲ. ಅಕಾಲಿದಳ ಇಲ್ಲದ ಎನ್ಡಿಎಯನ್ನು ನಾನು ಮೈತ್ರಿಕೂಟ ಎಂದು ಪರಿಗಣಿಸಲಾರೆ ಎಂದು ಹೇಳಿದ್ದಾರೆ.