ನವದೆಹಲಿ, ಸೆ. 28 (DaijiworldNews/MB) : ತನ್ನ 23ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹೋರಾಡಿ ನೇಣಿಗೆ ಶರಣಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಧೀರ ನಾಯಕ ಶಹೀದ್ ಭಗತ್ ಸಿಂಗ್ ಅವರ 113ನೇ ಜಯಂತಿ ಇಂದು. ಈ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಗತ್ ಸಿಂಗ್ನ್ನು ಸ್ಮರಿಸಿದ್ದಾರೆ.
ತಾಯಿ ಭಾರತಿಯ ವೀರ ಪುತ್ರ ಅಮರ್ ಶಹೀದ್ ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ನಮನ. ಅವರ ಶೌರರ್ಯವು ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಪರಿವರ್ತಕ ಆಲೋಚನೆಗಳು ಮತ್ತು ಅನನ್ಯ ತ್ಯಾಗದಿಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ನಿರ್ದೇಶನ ನೀಡಿದವರು ಭಗತ್ ಸಿಂಗ್. ಅವರು ದೇಶದ ಯುವಜನರಲ್ಲಿ ಸ್ವಾತಂತ್ರ್ಯದ ಸಂಕಲ್ಪವನ್ನು ಜಾಗೃತಗೊಳಿಸಿದರು. ಭಗತ್ ಸಿಂಗ್ ಅವರು ಎಲ್ಲಾ ದೇಶವಾಸಿಗಳಿಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.