ಬೆಂಗಳೂರು,ಸೆ 28 (DaijiworldNews/HR): ಇಂದಿನ ಯುವಕರು ನಾಳಿನ ನಾಯಕರಾಗುವುದು ಪ್ರದಾನಿ ಮೋದಿಗೆ ಇಷ್ಟವಿಲ್ಲ, ಇಂದಿನ ಯುವಕರು ಇಂದೇ ನಾಯಕರಾಗಬೇಕು ಎಂಬುದು ಮೋದಿ ಅಭಿಲಾಷೆಯಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪಕ್ಷದ ಸಂಘಟನೆಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ತೇಜಸ್ವಿ, ನಾನು ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಿಂದ ಈ ಹುದ್ದೆ ಅಲಂಕರಿಸಿದ್ದು, ಇದು ಎಲ್ಲಾ ಕನ್ನಡಿಗರ ಮತ್ತು ನನ್ನ ಕ್ಷೇತ್ರದ ಜನರ ಆಶೀರ್ವಾದ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಹಿಂದೆ ರಾಜಕೀಯ ಹಿನ್ನೆಲೆ ಇಲ್ಲದ ಜನರಿಗೆ ಅವಕಾಶ ನೀಡಿದರೆ, ಕೆಲವು ಪಕ್ಷಗಳು ವಂಶವಾಹಿಯಾಗಿ ಅಧಿಕಾರ ನೀಡುತ್ತಿದ್ದವು ಎಂದು ಹೇಳಿದ್ದಾರೆ.
ದೇಶಾದ್ಯಂತ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು ನನ್ನ ಪ್ರಮುಖ ಧ್ಯೇಯವಾಗಿದೆ. ಅತ್ಯಂತ ಸಾಧಾರಣ ಮತ್ತು ಸಾಮಾನ್ಯ ಹಿನ್ನೆಲೆ, ಬಡ ಮತ್ತು ದುರ್ಬಲ ವಿಭಾಗಗಳಿಂದ ಬಂದವರನ್ನು ಗುರುತಿಸಿ, ದೇಶಾದ್ಯಂತ ನಾಯಕತ್ವದ ಸ್ಥಾನಗಳನ್ನು ಪಡೆಯಲು ಮತ್ತು ಸಂಘಟನೆಗೆ ಶಕ್ತಿ ನೀಡಲು ಅವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ಬಿಜೆಪಿ ನಗಣ್ಯ ಹೆಜ್ಜೆಗುರುತನ್ನು ಹೊಂದಿದೆ, ಇಂದು ಯುವ ನಾಯಕರಿಗೆ ಪ್ರಮುಖ ಸವಾಲಾಗಿದೆ. ಏಕೆಂದರೇ ನಾವು ಕಿರಿಯರು, ಆದರೆ ಪಕ್ಷ ವೇಗವಾಗಿ ಬೆಳೆಯುತ್ತಿದೆ ಎಂದರು.