ಬೆಂಗಳೂರು, ಸೆ 28 (DaijiworldNews/HR): ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಢಿಸಿದಂತೆ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎನ್ ಡಿಪಿಎಸ್ ನ್ಯಾಯಾಲಯೂ ಅರ್ಜಿಯನ್ನು ತಿರಸ್ಕರಿಸಿತು. ಪ್ರಕರಣದ ಇತರ ಆರೋಪಿಗಳಾದ ರಾಹುಲ್, ಶಿವಪ್ರಕಾಶ್ ಮತ್ತು ವಿನಯ್ ಜಾಮೀನು ನಿರಾಕರಿಸಲಾಗಿದೆ.
ಇನ್ನು ಇತರ ಆರೋಪಿಗ ಜಾಮೀನು ಅರ್ಜಿ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು ಎಸ್ ಪಿಪಿ ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಗಿದೆ ಪ್ರಶಾಂತ್ ರಂಕಾ,
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.14ರಂದು ರಾಗಿಣಿ ಬಂಧನವಾಗಿದ್ದರೆ, ಎರಡು ದಿನಗಳ ನಂತರ ಎಂದರೆ ಸೆ.16ರಂದು ಸಂಜನಾರ ಮನೆಗೆ ದಾಳಿ ಮಾಡಿದ ಬಳಿಕ ಅವರನ್ನು ಬಂಧಿಸಿದ್ದರು.