ನವದೆಹಲಿ, ಸೆ 29(DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದಲ್ಲಿ ನಮಾಮಿ ಗಂಗೆ ಯೋಜನೆಯಡಿ ಆರು ಬೃಹತ್ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಆರು ಬೃಹತ್ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.
68 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ, ಹರಿದ್ವಾರದ ಚಾಂಡಿ ಘಾಟ್ನಲ್ಲಿ ಗಂಗಾ ಅವಲೋಕನ್ ವಸ್ತು ಸಂಗ್ರಹಾಲಯ, ಹರಿದ್ವಾರದ ಜಗ್ಜೀತ್ಪುರದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್ಡಿಗಳ ಉನ್ನತೀಕರಣ, ಸರಾಯ್ನಲ್ಲಿ 18 ಎಂಎಲ್ಡಿ ಎಸ್ಟಿಪಿ ನಿರ್ಮಾಣ ಯೋಜನೆಗಳು ಸೇರಿವೆ.
ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಹಾಗೂ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿದ್ದಪಡಿಸಿದ ರೋಯಿಂಗ್ ಡೌನ್ ದಿ ಗಂಗಾ ಪುಸ್ತಕವನ್ನು ಈ ಸಮಾರಂಭದ ಸಂದರ್ಭ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.
ಚೋರ್ಪಾನಿಯಲ್ಲಿ 5 ಎಂಎಲ್ಡಿ ಎಸ್ಟಿಪಿ ಮತ್ತು 1 ಎಲ್ಎಲ್ಡಿ ಮತ್ತು 0.01 ಎಮ್ಎಲ್ಡಿ ಸಾಮರ್ಥ್ಯ ಹೊಂದಿರುವ ಎರಡು ಎಸ್ಟಿಪಿಗಳನ್ನು ಬದ್ರಿನಾಥ್ನಲ್ಲಿ ಪ್ರಧಾನಿ ಉದ್ಘಾಟಿಸಲಿದ್ದಾರೆ.
ಗಂಗಾ ನದಿಯ ಬಳಿಯಿರುವ 17 ಪಟ್ಟಣ್ಣಗಳಲ್ಲಿ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಉತ್ತರಾಖಂಡದಲ್ಲಿ ಎಲ್ಲಾ 30 ಯೋಜನೆಗಳು (ಶೇಕಡಾ 100) ಪೂರ್ಣಗೊಂಡಿವೆ. ಇದು ಒಂದು ಮಹತ್ವದ ಸಾಧನೆಯಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.