ಲಡಾಖ್, ಸೆ. 29 (DaijiworldNews/MB) : ಭಾರತ ಹಾಗೂ ಚೀನಾದ ಲಡಾಖ್ ಗಡಿಯಲ್ಲಿ ಯುದ್ದವೂ ನಡೆಯಲ್ಲ, ಶಾಂತಿಯೂ ಇಲ್ಲ. ಪರಿಸ್ಥಿತಿಯು ಪ್ರಕ್ಷುಬ್ಧವಾಗಿದೆ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಭಾರತ ಹಾಗೂ ಚೀನಾದ ಲಡಾಖ್ ಗಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೂರ್ವ ಲಾಡಾಖ್ನಲ್ಲಿ ಭಾರತ ಚೀನಾ ನಡುವೆ ಸಂಘರ್ಷ ಉಂಟಾಗಿದ್ದು ಈ ನಡುವೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ವಾಯು ಸೇನೆ ಮುಖ್ಯಸ್ಥರು ಭಾರತ ಹಾಗೂ ಚೀನಾದ ಲಡಾಖ್ ಗಡಿಯಲ್ಲಿ ಯುದ್ದವೂ ನಡೆಯಲ್ಲ, ಶಾಂತಿಯೂ ಇಲ್ಲ. ಪರಿಸ್ಥಿತಿಯು ಪ್ರಕ್ಷುಬ್ಧವಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಭಾರತದ ವಾಯುಸೇನೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ, ಐಎಎಫ್ಗೆ ಸಾಕಷ್ಟು ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಸಾಮರ್ಥ್ಯ ವರ್ಧನೆಯನ್ನು ಒದಗಿಸಿದಂತಾಗಿದೆ ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾರೆ.