ನವದೆಹಲಿ, ಸೆ. 30 (DaijiworldNews/MB) : ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಉಪರಾಷ್ಟ್ರಪತಿಗಳ ಸಚಿವಾಲಯ ಮಂಗಳವಾರ ರಾತ್ರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಇಂದು ಬೆಳಿಗ್ಗೆ ಭಾರತದ ಉಪಾಧ್ಯಕ್ಷರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವ್ ಆಗಿದೆ. ಅವರಿಗೆ ಯಾವುದೇ ಕೊರೊನಾ ಸೋಂಕು ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ. ಮನೆಯಲ್ಲೇ ಹೋಂ ಕ್ವಾರಂಟೈನ್ಗೆ ಒಳಗಾಗುವಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ. ಅವರ ಪತ್ನಿ ಉಷಾ ನಾಯ್ಡು ಅವರಿಗೆ ಕೊರೊನಾ ನೆಗೆಟಿವ್ ಆಗಿದೆ. ಅವರು ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.