ನವದೆಹಲಿ, ಸೆ. 30 (DaijiworldNews/MB) : ಭಾರತದ ರಕ್ಷಣಾ ಪಡೆಗೆ ಮತ್ತಷ್ಟು ಬಲ ತುಂಬಿದ 400 ಕಿ.ಮೀ ಗೂ ಮೀರಿದ ಟಾರ್ಗೆಟ್ನ್ನು ತಲುಪಿ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿದೆ.
ಡಿಆರ್ಡಿಒದ ಪಿಜೆ-10 ಪ್ರಾಜೆಕ್ಟ್ನ ಅಡಿಯಲ್ಲಿ ಈ ಸ್ಥಳೀಯ ಬೂಸ್ಟರ್ನ್ನು ಹೊಂದಿರುವ ಕ್ಷಿಪಣಿಯನ್ನು ತಯಾರಿಸಲಾಗಿದ್ದು ಕ್ಷಿಪಣಿಯ ಏರ್ಫ್ರೇಮ್ ಹಾಗೂ ಬೂಸ್ಟರ್ನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾ ಹಾಗೂ ಭಾರತದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಆರಂಭದಲ್ಲಿ 290- ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.