ನವದೆಹಲಿ, ಸೆ. 30 (DaijiworldNews/MB) : ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬುಧವಾರ ಬಂದಿದ್ದು ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ 32 ಮಂದಿ ಆರೋಪಿಗಳ ವಿರುದ್ದದ ಪ್ರಕರಣ ಖುಲಾಸೆಯಾಗಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್, ಸಿಪಿಐಎಂ ಮೊದಲಾದ ಪಕ್ಷದ ನಾಯಕರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್.ಕೆ.ಅಡ್ವಾಣಿ, ಶ್ರೀ ಕಲ್ಯಾಣ್ ಸಿಂಗ್, ಡಾ.ಮುರಳಿ ಮನೋಹರ್ ಜೋಶಿ, ಉಮಾಜಿ ಸೇರಿದಂತೆ 32 ಜನರ ಯಾವುದೇ ಪಿತೂರಿಯಿಲ್ಲ ಎಂಬ ಲಖ್ನೋ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ತೀರ್ಪಿನಿಂದಾಗಿ ಹಲವು ವರ್ಷಗಳು ಕಳೆದರೂ ಸರಿ ಆದರೆ ನ್ಯಾಯಕ್ಕೆ ಜಯವಾಗಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಶಿವಸೇನೆ ಮುಖಂಡ ಸಂಜಯ್ ರಾವತ್, ನಾನು ಮತ್ತು ನನ್ನ ಪಕ್ಷ ಶಿವಸೇನೆ, ಈತೀರ್ಪನ್ನು ಸ್ವಾಗತಿಸುತ್ತದೆ. ಅಡ್ವಾಣಿ, ಮುರಳಿ ಮನೋಹರ್, ಉಮಾ ಭಾರತಿ ಮತ್ತು ಪ್ರಕರಣದಲ್ಲಿ ಖುಲಾಸೆಗೊಂಡ ಎಲ್ಲರಿಗೂ ಅಭಿನಂದಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇನ್ನು ಟ್ವೀಟ್ ಮಾಡಿರುವ ಸಿಪಿಎಂ ಪಕ್ಷದ ನಾಯಕ ಸೀತಾರಾಂ ಯೆಚೂರಿ, ಇದು ನ್ಯಾಯದ ಸಂಪೂರ್ಣ ಅಣಕು. ಬಾಬರಿ ಮಸೀದಿಯನ್ನು ಕೆಡವಲು ಸಂಚು ಮಾಡಿದ ಎಲ್ಲರ ವಿರುದ್ದ ಪ್ರಕರಣ ಖುಲಾಸೆಗೊಂಡಿದೆ. ಇದು ಸ್ವಯಂ ಪ್ರಚೋದಿತವೇ? ಎಂದು ಪ್ರಶ್ನಿಸಿದ್ದು ಅಂದಿನ ಸಿಜೆಐ ನೇತೃತ್ವದ ಸಂವಿಧಾನ ಪೀಠವು ಈ ಮಸೀದಿ ಧ್ವಂಸ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಆದರೆ ಇಂದು ಈ ತೀರ್ಪು! ಶೇಮ್ ಎಂದು ಹೇಳಿದ್ದಾರೆ.
ಎಐಎಂಐಎಂ ಮುಖಂಡ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ಇಂದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಒಂದು ದುಃಖದ ದಿನ. ಈಗ ನ್ಯಾಯಾಲಯವು ಯಾವುದೇ ಪಿತೂರಿ ನಡೆದಿಲ್ಲ ಎಂದು ಹೇಳುತ್ತದೆ. ಈಗ ನನಗೆ ದಯವಿಟ್ಟು ತಿಳಿಸಿ, ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಖುಲಾಸೆ ಮಾಡಲು ಎಷ್ಟು ದಿನಗಳ ತಿಂಗಳುಗಳ ಸಿದ್ಧತೆಗಳು ಬೇಕಾಗುತ್ತವೆ? ಎಂದು ಪ್ರಶ್ನಿಸಿದ್ದು ಇದು ನ್ಯಾಯದ ವಿಷಯವಾಗಿದೆ. ಬಾಬ್ರಿ ಮಸೀದಿಯನ್ನು ಧ್ವಂಸಕ್ಕೆ ಕಾರಣವಾದ ಜನರಿಗೆ ಶಿಕ್ಷೆ ನಿಡ