ನವದೆಹಲಿ, ಅ.01 (DaijiworldNews/HR): ಭಾರತದಲ್ಲಿ ಪೆಟ್ರೋಲ್ ಬಳಕೆ ಪ್ರಮಾಣ ಶೇ.2ರಷ್ಟು ಏರಿಕೆಯಾಗಿದ್ದು, ಡೀಸೆಲ್ ಮಾರಾಟದಲ್ಲಿ ಶೇ.7.3ರಷ್ಟು ಇಳಿಕೆಯಾಗಿರುವುದಾಗಿ ಸರ್ಕಾರಿ ಸ್ವಾಮಿತ್ವದ ಇಂಡಿಯನ್ ಆಯಿಲ್ ಅಂಕಿ-ಅಂಶ ತಿಳಿಸಿರುವುದಾಗಿ ವರದಿ ಹೇಳಿದೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಮಾರ್ಚ್ ನಿಂದ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ತೆರವಿನ ನಂತರ ರಾಜ್ಯಗಳಲ್ಲಿನ ಪೆಟ್ರೋಲ್ ಮಾರಾಟದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.
ಇನ್ನು ರಾಜ್ಯ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆ ಭಾರತದ ಚಿಲ್ಲರೆ ಇಂಧನ ಮಳಿಗೆಗಳಲ್ಲಿ ಶೇ.90 ರಷ್ಟು ಪಾಲನ್ನು ಹೊಂದಿವೆ.