ಬೆಂಗಳೂರು, ಅ 01(DaijiworldNews/PY): ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಾದ ಗಲಭೆಗೆ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷಗಳ ಪೂರ್ವ ನಿಯೋಜಿತ ಪಿತೂರಿಯ ಪರಿಣಾಮವಾಗಿದೆ ಎಂದು ಬಿಜೆಪಿ ಸತ್ಯ ಶೋಧನಾ ಸಮಿತಿ ಹೇಳಿದೆ.
ಶಾಸಕ ಅರವಿಂದ್ ಲಿಂಬಾವಳಿ ಅವರ ನೇತೃತ್ವದಲ್ಲಿ ಬಿಜೆಪಿ ಈ ಸಮಿತಿಯನ್ನು ರಚಿಸಿದ್ದು, ಸೆ.30ರ ಬುಧವಾರದಂದು ಈ ಸಮಿತಿಯು ತನ್ನ ಸಂಶೋದನೆಗಳ ವರದಿಯನ್ನು ಸಲ್ಲಿಸಿದೆ.
ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ನಳಿನ್ ಅವರು. ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸಿದರು.
ಕಾಂಗ್ರೆಸ್ ಹಾಗೂ ಎಸ್ಡಿಪಿಐ ಈ ಗಲಭೆಯನ್ನು ನಡೆಸಿವೆ. ಹಾಗೂ ಸಮಿತಿ ನೀಡಿದ ವರದಿಯು ಇದು ಪೂರ್ವ ನಿಯೋಜಿತ ಗಲಭೆ ಎಂದು ದೃಢಪಡಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಧಿಕಾರಕ್ಕಾಗಿ ಈ ಗಲಭೆಗಳನ್ನು ಮಾಡಿದೆ. ಈ ಗಲಭೆಯಿಂದ ಸಿಸಿಟಿವಿ, ವಾಹನಗಳು ಹಾಗೂ ಮನೆಗಳು ಸುಟ್ಟುಹೋಗಿವೆ. ಇದು ಪೂರ್ವ ನಿಯೋಜಿತ ಯೋಜನೆ ಎಂದರು.
ಈ ಗಲಭೆಯಲ್ಲಿ ಬಿಬಿಎಂಪಿ ಕಾಪೊರೇಟರ್ಗಳಾದ ಅಬ್ದುಲ್ ಹಫೀಜ್ ಶಾಫಿ, ಸಂಪತ್ ರಾಜ್ ಹಾಗೂ ಇರ್ಷಾದ್ ಬೇಗಂ ಅವರ ಪತಿ ಭಾಗಿಯಾಗಿದೆ ಎಂದು ಸಮಿತಿ ಆರೋಪಿಸಿತ್ತು. ನಾಯಕತ್ವದ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ವಿಫಲವಾದ ಪರಿಣಾಮವೇ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.