ನವದೆಹಲಿ,ಅ.01 (DaijiworldNews/HR): ಆಮದು ವಸ್ತುವಿನ ಮೇಲೆ ಶೇ.5ರಷ್ಟು ಕಸ್ಟಮ್ಸ್ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದ ಎಲ್ಇಡಿ, ಎಲ್ ಸಿಡಿ ಟಿವಿಗಳ ಬೆಲೆ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಎಲ್ ಇಡಿ, ಎಲ್ ಸಿಡಿ ಟಿವಿ ಪ್ಯಾನೆಲ್ ಗಳ ಮೇಲೆ ಶೇ.5ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಇವೈ ಟ್ಯಾಕ್ಸ್ ಪಾರ್ಟನರ್ ಅಭಿಷೇಕ್ ಜೈನ್ ಪ್ರಕಾರ, ಆಮದು ಸುಂಕದ ಮುಖ್ಯ ಉದ್ದೇಶ ಭಾರತದಲ್ಲಿ ಟೆಲಿವಿಷನ್ಸ್ ಬಿಡಿಭಾಗಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿದೆ ಎಂದು ತಿಳಿಸಿದ್ದಾರೆ.
ಆಮದು ಸುಂಕದಿಂದಾಗಿ ಕೆಲವು ಟಿವಿ ತಯಾರಕರಿಗೆ ಹೆಚ್ಚಿನ ಹೊರೆಯಾಗಲಿದೆ. ದೇಶೀಯವಾಗಿ ಬಿಡಿಭಾಗಗಳ ಉತ್ಪಾದನೆ ಆರಂಭಿಸಿದರೆ ಟಿವಿಗಳ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದರು.
ಇನ್ನು ಕಳೆದ ವರ್ಷದವರೆಗೆ 7 ಸಾವಿರ ಕೋಟಿ ರೂಪಾಯಿಯಷ್ಟು ಬಿಡಿಭಾಗಗಳು ಆಮದಾಗಿದ್ದು, ಈ ವರ್ಷದ ಜುಲೈ ನಂತರ ಅನ್ವಯವಾಗುವಂತೆ ಟೆಲಿವಿಷನ್ ಆಮದು ಕೂಡಾ ನಿರ್ಬಂಧಿತ ಕೆಟಗರಿಯಲ್ಲಿ ಕೇಂದ್ರ ಸರ್ಕಾರ ಸೇರಿಸಿರುವುದಾಗಿ ವರದಿ ತಿಳಿಸಿದೆ.