ತಿರುವನಂತಪುರಂ,ಅ.01 (DaijiworldNews/HR): ಕೊರೊನಾ ಕಾರಣದಿಂದ ದೇಶ ಲಾಕ್ ಡೌನ್ ಆಗಿದ್ದು, ಅನೇಕರು ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದರೆ, ಇಲ್ಲೊಬ್ಬರು ಯುವತಿ ಲಾಕ್ ಡೌನ್ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಮೂರು ತಿಂಗಳ ಅವಧಿಯಲ್ಲಿ 350 ಕೋರ್ಸ್ ಗಳನ್ನು ಪೂರ್ಣಗೊಳಿಸಿದ್ದಾರೆ.
ಕೇರಳದ ಕೊಚ್ಚಿನ್ ನ ದ್ವಿತೀಯ ವರ್ಷದ ಎಂಎಸ್ ಸಿ ಬಯೋಕೆಮಿಸ್ಟ್ರಿ ಪದವಿ ಕಲಿಯುತ್ತಿರುವ ಆರತಿ ರಘುನಾಥ್ ಈ ಸಾಧನೆ ಮಾಡಿದ ಯುವತಿ.
ಆರತಿ ಮೂರು ತಿಂಗಳಲ್ಲಿ 350 ಆನ್ ಲೈನ್ ಕೋರ್ಸುಗಳನ್ನು ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.
ಈ ಕುರಿತು ಮಾತನಾಡಿರುವ ಆರತಿ, ಆನ್ ಲೈನ್ ಕೋರ್ಸ್ ಗಳ ಬಗ್ಗೆ ಕಾಲೇಜು ಉಪನ್ಯಾಸಕರಿಂದ ತಿಳಿದುಕೊಂಡಿದ್ದೆ, ಲಾಕ್ ಡೌನ್ ಸಮಯವನ್ನು ಅದಕ್ಕೆ ಬಳಕೆಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಆರತಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ವರ್ಜೀನಿಯಾ, ಯುನಿವರ್ಸಿಟಿ ಆಫ್ ಕೊಲೊರಾಡೋ ಬೌಲ್ಡರ್, ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಯುನಿವರ್ಸಿಟಿ ಆಫ್ ಡೆನ್ಮಾರ್ಕ್, ಯುನಿವರ್ಸಿಟಿ ಆಫ್ ಕೋಪನ್ ಹೆಗನ್ ಗಳ ಕೋರ್ಸುಗಳನ್ನು ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.