ಬೆಂಗಳೂರು, ಅ.01 (DaijiworldNews/HR): 1992 ಡಿಸೆಂಬರ್ 6ರ ರಂದು ನಡೆದ ಬಾಬರಿ ಮಸೀದಿ ಧ್ವಂಸದ ಅನೇಕ ಸಾಕ್ಷಿಗಳನ್ನ ಜನ ನೋಡಿದ್ದು, ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ. ಆದರೆ ವಿಶೇಷ ಸಾಕ್ಷಿ ಇಲ್ಲವೆಂದು ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿಕಾಣುತ್ತಿಲ್ಲ. ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗುತ್ತದೆ. ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ಬಡಜನರಿಗೆ ಸಿಗುವ ತೀರ್ಪು, ಶಿಕ್ಷೆ ಮೊಟಕಾಗಿದೆ, ಇದರಲ್ಲಿ ಪಾರದರ್ಶಕತೆ ಇಲ್ಲ ಎನ್ನುತ್ತಿದ್ದಾರೆ ಎಂದರು.
ಇನ್ನು ಇದೇ ವಿಚಾರವಾಗಿ ಪ್ರಶ್ನಿಸಿದ ಖರ್ಗೆ, ಪ್ರಕರಣಕ್ಕೆ ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕುಕೊಟ್ಟಿದ್ದರು. ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ ಹೋಗಲು ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ. ಹಾಗಾದರೆ ಬಾಬರಿ ಮಸೀದಿ ಹೊಡೆದಿದ್ದು ಯಾರು? ಎಂಬುದಾಗಿ ಪ್ರಶ್ನಿಸಿದ್ದಾರೆ.