ಮೈಸೂರು, ಅ. 02(DaijiworldNews/PY): ಸಂಪುಟ ವಿಸ್ತರಣೆ ವಿಷಯದಲ್ಲಿ ನಾನೊಬ್ಬ ಬಡಪಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಚಾರ ನನ್ನ ಕೈಯಲ್ಲಿ ಇದ್ದರೆ ಅದು ಬೇರೆಯೇ ಸಂಗತಿ. ಆದರೆ, ಈ ವಿಚಾರವಾಗಿ ನಾನೊಬ್ಬ ಬಡಪಾಯಿ. ಈ ಬಗ್ಗೆ ಅಧಿಕಾರ ಇರುವವರ ಬಳಿ ಕೇಳಿ ಎಂದರು.
ಆರ್.ಆರ್.ಕ್ಷೇತ್ರದಿಂದ ಮುನಿರತ್ನಗೆ ಟಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿರತ್ನ ಅವರಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇವೆ. ಪಕ್ಷದ ಕೋರ್ ಕಮಿಟಿಯಲ್ಲಿ ಈ ವಿಚಾರದ ಅಂತಿಮ ನಿರ್ಧಾರವಾಗುತ್ತದೆ. ಮುನಿರತ್ನ ಅವರಿಗೆ ಟಿಕೆಟ್ ಸಿಗುವ ಭರವಸೆ ಇದೆ. ಇದರ ತೀರ್ಮಾನ ಹೈಕಮಾಂಡ್ಗೆ ಸೇರಿದ್ದು ಎಂದು ಹೇಳಿದರು.
ನಂತರ ಮೈಸೂರು ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆಯ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ದಕ್ಷ ಹಾಗೂ ಪ್ರಾಮಾಣಿಕರು. ವರ್ಗಾವಣೆ ಮಾಡುವುದು ಸರ್ಕಾರದ ಆಡಳಿತಾತ್ಮಕ ತೀರ್ಮಾನವಾಗಿದ್ದು, ಈ ವಿಚಾರದಲ್ಲಿ ದಿಢೀರ್ ಎಂದು ಬರುವುದಿಲ್ಲ ಎಂದು ತಿಳಿಸಿದರು.