ಬೆಂಗಳೂರು, ಅ. 02(DaijiworldNews/PY): ನಿರೀಕ್ಷಿಸಿದಂತೆ ಉತ್ತರ ಪ್ರದೇಶ ಪೊಲೀಸರು ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂಬ ತೀರ್ಪು ಕೊಟ್ಟಿದ್ದಾರೆ. ಯೋಗಿ ಸರ್ಕಾರದಿಂದ ಮಾತ್ರ ಇಂತಹ ಮಹಾ ಪವಾಡಗಳು ನಡೆಯಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿರೀಕ್ಷಿಸಿದಂತೆ ಉತ್ತರ ಪ್ರದೇಶ ಪೊಲೀಸರು ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂಬ ತೀರ್ಪು ಕೊಟ್ಟಿದ್ದಾರೆ. ಮೊನ್ನೆ ಮಧ್ಯರಾತ್ರಿ ಪೊಲೀಸರು ಕದ್ದುಮುಚ್ಚಿ ಶವ ಸುಟ್ಟಾಗಲೇ ಕೇಸ್ ಉಲ್ಟಾ ಹೊಡೆಯುವ ಅನುಮಾನ ಕಾಡಿತ್ತು. ಅದು ಕೊನೆಗೂ ನಿಜವಾಗಿದೆ. ಯೋಗಿ ಸರ್ಕಾರದಿಂದ ಮಾತ್ರ ಇಂತಹ ಮಹಾ ಪವಾಡಗಳು ನಡೆಯಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಹತ್ರಸ್ನಲ್ಲಿ ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ್ದ 19 ವರ್ಷದ ದಲಿತ ಯುವತಿಯ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕುಟುಂಬದವರಿಗೆ ಮಾಡಲು ಅವಕಾಶ ನೀಡದೆ ರಾತ್ರೋರಾತ್ರಿ ಪೊಲೀಸರು ಅಂತ್ಯ ಸಂಸ್ಕಾರ ನಡೆಸಿದ್ದರು.