ಮುಂಬೈ, ಅ. 02 (DaijiworldNews/MB) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲಿನ ಉತ್ತರ ಪ್ರದೇಶ ಪೊಲೀಸರು ನಡೆಸಿದ ಹಲ್ಲೆ ಪ್ರಜಾಪ್ರಭ್ರುತ್ವದ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಕಿಡಿಕಾರಿದ್ದಾರೆ.
ಗುರುವಾರ ಹತ್ರಸ್ ಸಂಸ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತೆರಳಿದ್ದಾಗ ಅವರ ಬೆಂಗಾವಲು ಕಾರನ್ನು ಉತ್ತರ ಪ್ರದೇಶ ಪೊಲೀಸರು ಗ್ರೇಟರ್ ನೋಯ್ಡಾದಲ್ಲಿ ತಡೆದಿದ್ದು ರಾಹುಲ್ ಹಾಗೂ ಪ್ರಿಯಾಂಕ ಕಾಲ್ನಡಿಗೆಯಲ್ಲೇ ಹತ್ರಸ್ಗೆ ಹೆಜ್ಜೆಇಟ್ಟಿದ್ದರು. ಈ ವೇಳೆ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ನನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿ ನೆಲಕ್ಕೆ ದೂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವತ್ ಅವರು, ''ನಾವು ಎಂದಿಗೂ ಕೂಡಾ ರಾಹುಲ್ ಗಾಂಧಿ, ಇಂದಿರಾ ಗಾಂಧಿ ಅವರ ಮೊಮ್ಮಗ ಮತ್ತು ರಾಜೀವ್ ಗಾಂಧಿ ಅವರ ಪುತ್ರನೆಂಬುದನ್ನು ಮರೆಯಬಾರದು. ದೇಶಕ್ಕಾಗಿ ಅವರಿಬ್ಬರು ತ್ಯಾಗ ಮಾಡಿದ್ದಾರೆ. ಪೊಲೀಸರು ರಾಹುಲ್ ಗಾಂಧಿ ಅವರ ಮೇಲೆ ನಡೆಸಿರುವ ದೌರ್ಜನ್ಯವನ್ನು ದೇಶ ಎಂದಿಗೂ ಕ್ಷಮಿಸದು. ಇದು ದೇಶದ ಪ್ರಜಾಪ್ರಭುತ್ವದ ಮೇಲೆ ನಡೆಸಿದ ಗ್ಯಾಗ್ ರೇಪ್ನಂತೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ನಮಗೆ ಕಾಂಗ್ರೆಸ್ನೊಂದಿಗೆ ಭಿನ್ನಾಭಿಪ್ರಾಯವಿರಬಹುದು, ಆದರೆ, ಅವರೊಂದಿಗೆ ಪೊಲೀಸರು ನಡೆಸಿದ ವರ್ತನೆಯನ್ನು ನಾವು ಬೆಂಬಲಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಪೊಲೀಸರು ಅವರ ಕುತ್ತಿಗೆಯನ್ನು ಹಿಡಿದು ನೆಲಕ್ಕೆ ದೂಡಿದ್ದಾರೆ. ಪೊಲೀಸರ ಈ ವರ್ತನೆ ಖಂಡನೀಯ ರಾಹುಲ್ ಗಾಂಧಿ ರಾಷ್ಟ್ರೀಯ ರಾಜಕೀಯ ಮುಖಂಡರು ಎಂಬುದು ತಿಳಿದಿರಬೇಕು'' ಎಂದು ಹೇಳಿದ್ದಾರೆ.