ಮುಂಬೈ, 02 (DaijiworldNews/HR): ನನ್ನ ವಿರುದ್ಧ ಬಾಲಿವುಡ್ ನಟಿ ಪಾಯಲ್ ಘೋಷ್ ಮಾಡಿರುವ ಅತ್ಯಾಚಾರದ ಆರೋಪ ಸುಳ್ಳು. ಆಕೆ ಎಫ್ಐಆರ್ನಲ್ಲಿ ಪ್ರಸ್ತಾಪಿಸಿದ ದಿನ ನಾನು ದೇಶದಲ್ಲೇ ಇರಲಿಲ್ಲ ಎಂಬುದಾಗಿ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕಶ್ಯಪ್ ಅವರ ಪರ ವಕೀಲರು, 2013 ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಅನುರಾಗ್ ಕಶ್ಯಪ್ ಅವರು ಶ್ರೀಲಂಕಾದಲ್ಲಿದ್ದರು. ಈ ಸಂಬಂಧಿತ ದಾಖಲೆಗಳನ್ನು ವಿಚಾರಣೆ ವೇಳೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅನುರಾಗ್ ಕಶ್ಯಪ್ ಅವರು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಪೊಲೀಸರು ಪ್ರಕರಣ ಸಂಬಂಧ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೇಳಿಕೆಯ ಪುಷ್ಟೀಕರಣಕ್ಕಾಗಿ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಪಾಯಲ್ ಮಾಡಿರುವ ಎಲ್ಲಾ ಆಪಾದನೆಗಳು ಸುಳ್ಳು ಎಂದು ಕಶ್ಯಪ್ ಪರ ವಕೀಲರಾದ ಪ್ರಿಯಾಂಕಾ ಕಿಮ್ಮಾನಿ ಹೇಳಿಕೆ ನೀಡಿದ್ದಾರೆ.
ನಟಿ ಪಾಯಲ್ 2013 ರ ಆಗಸ್ಟ್ನಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸೆ.22 ರಂದು ವರ್ಸೋವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.