ತುಮಕೂರು, ಅ. 02(DaijiworldNews/PY): ಎಂದಿಗೂ ಸಿಎಂ ಬಿಎಸ್ವೈ ಅವರು ಅಳುಮುಂಜಿಯಂತೆ ಅಳುವುದಿಲ್ಲ. ಹೆಚ್ಡಿಕೆ ಅವರು ಸಭೆ ಸಮಾರಂಭದಲ್ಲಿ ಅಪ್ಪ, ಮಕ್ಕಳು ಸೇರಿದಂತೆ ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಾಲಾಗಿ ಬಂದು ಅಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಶಿರಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ವೈ ಅವರಿಗೆ ಈಗ 78 ವರ್ಷ ಅವರ ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣಿಸುತ್ತದೆ. ಅವರು ಅಳುಮುಂಜಿಯಂತೆ ಅಳುವುದಿಲ್ಲ ಎಂದರು.
ಮಾಜಿ ಸಿಎಂ ಹೆಚ್ಡಿಕೆ ಅವರು ಶಿರಾ ಮಂದಿ ಹಾಲು ಕೊಡುತ್ತಿರೋ ಅಥವಾ ವಿಷ ಕೊಡುತ್ತಿರೋ ಎಂದು ಕೇಳುತ್ತಿದ್ದಾರೆ. ಕೊರೊನಾ ಸಂದರ್ಭ ಶಿರಾ ಮಂದಿ ಅವರಿಗೆ ಕಷಾಯ ಕೊಟ್ಟು ಕಳುಹಿಸಿ ಎಂದು ಹೇಳಿದರು.
ಶಿರಾದಲ್ಲಿ ಸೆ.30ರಂದು ನಡೆದಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಸಂದರ್ಭ ಮಾತನಾಡಿದ್ದ ಕುಮಾರಸ್ವಾಮಿ ಅವರು, ಕೈ ನಾಯಕರ ಸಹವಾಸ ಮಾಡಿದ ಕಾರಣ ಜನರು ನನ್ನನ್ನು ಒಪ್ಪಿಕೊಂಡಿಲ್ಲ. ಶಿರಾ ಮಂದಿ ನನಗೆ ವಿಷ ನೀಡುತ್ತಾರೋ ಅಥವಾ ಹಾಲು ನೀಡುತ್ತಾರೋ ಎನ್ನುವ ವಿಚಾರವನ್ನು ನೀವೇ ತೀರ್ಮಾನ ಮಾಡಬೇಕು. ಸರ್ಕಾರದಲ್ಲಿ ದುಡ್ಡಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದರು.