ಬೆಂಗಳೂರು, ಅ. 03 (DaijiworldNews/HR): ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ವಿರೇಂದ್ರ ಖಾನ್ನಾ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯ ಸಿಸಿಬಿಗೆ ಅನುಮತಿ ನೀಡಿದೆ.
ವಿಚಾರಣೆ ವೇಳೆಯಲ್ಲಿ ವಿರೇಂದ್ರ ಖಾನ್ನಾ ಪೊಲೀಸರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಜೊತೆಗೆ ಗ್ಯಾಡ್ಜೆಟ್ ಪಾಸ್ ವರ್ಡ್ ನೀಡಲು ಹಿಂಜರಿಯುತ್ತಿದ್ದು, ಆತನ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಅದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈ ಕುರಿತು ಮಾಹಿತಿ ನೀಡಿದ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ , ಆರೋಪಿಯ ಕೂದಲನ್ನು ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ಸ್ಯಾಂಪಲ್ ವರದಿ ಬಂದಿದೆ ಹಾಗಾಗಿ ಅದು ಕೂಡಾ ವಿಚಾರಣೆ ವೇಳೆಯಲ್ಲಿ ಪರಿಣಾಮ ಬೀರಲಿದೆ, ಜೊತೆಗೆ ರಕ್ತ ಹಾಗೂ ಮೂತ್ರದ ಮಾದರಿಯನ್ನುಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿದೆ ಎಂದು ತಿಳಿಸಿದ್ದಾರೆ.