ಮುಂಬೈ, ಅ. 03 (DaijiworldNews/MB) : ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಭಾವೆ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
81 ವರ್ಷದ ಪುಷ್ಪಾ ಭಾವೆ ಅವರು ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು ವರದಿ ತಿಳಿಸಿದೆ. ಸಂಯುಕ್ತ ಮಹಾರಾಷ್ಟ್ರ ಚಳವಳಿ ಮತ್ತು ಗೋವಾ ವಿಮೋಚನಾ ಆಂದೋಲನದಲ್ಲಿ ಭಾಗಿಯಾಗಿದ್ದ ಪುಷ್ಪಾ ಭಾವೆ ಅವರು ತುರ್ತು ಪರಿಸ್ಥಿತಿಯ ವೇಳೆ ಮೃಣಾಲ್ ಗೋರೆಯಂತಹ ರಾಜಕೀಯ ಕಾರ್ಯಕರ್ತರಿಗೆ ತಮ್ಮ ನಿವಾಸದಲ್ಲಿ ಆಶ್ರಯ ನೀಡಿದ್ದರು.
ಅವರು 1990 ರ ದಶಕದಲ್ಲಿ ದಾದರ್ ನಿವಾಸಿ ರಮೇಶ್ ಕಿಣಿ ನಿಗೂಢ ಸಾವು ಪ್ರಕರಣದಲ್ಲಿ ಬಿಲ್ಡರ್-ರಾಜಕಾರಣಿಗಳ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಧ್ವನಿ ಎತ್ತಿದ್ದರು ಮತ್ತು ತನಿಖೆಗೆ ಒತ್ತಾಯಿಸಿದ್ದರು.