ಶಿವಮೊಗ್ಗ. ಅ. 03 (DaijiworldNews/HR): ನೂತನ ಕೃಷಿ ಮಸೂದೆ ಅಂಗೀಕಾರಗೊಂಡಾಗ ಐತರು ಸಂತೋಷಪಟ್ಟಿದ್ದರು. ಆದರೆ ಅನೇಕ ವಿರೋಧ ಪಕ್ಷಗಳು ಈ ಕಾಯ್ದಿಗೆ ರೈತರ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿವೆ ಹಾಗಾಗಿ ರೈತರು ಸುಳ್ಳು ಹೇಳುವವರ ಬಗ್ಗೆ ಎಚ್ಚರದಿಂದಿರಬೇಕು. ಕಾಂಗ್ರೆಸ್ ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ವೈಭವೀಕರಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಾವು ಭಾರತದ ರಕ್ಷಣಾ ವ್ಯವಸ್ಥೆ ಬಲಪಡಿಸಲು ರಫೆಲ್ ಒಪ್ಪಂದ ಮಾಡಿಕೊಂಡಾಗ ಇದೊಂದು ದೊಡ್ಡ ಹಗರಣ ಎಂದು ಆಪಾದಿಸಿತ್ತು. ಬಳಿಕ ಹಗರಣ ಸುಳ್ಳು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತು. ಇದೀಗ ಬರೀ ಸುಳ್ಳು ಹೇಳಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷವು ಕೃಷಿ ಮಸೂದೆಯ ಬಗ್ಗೆ ಹೇಳುತ್ತಿರುವ ಸುಳ್ಳನ್ನು ರೈತರು ನಂಬಬಾರದು. ಕಾಂಗ್ರಸ್ ನವರಿಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಟೀಕೆ ಮಾಡುವುದೇ ಕೆಲಸ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರಿಗೆ ನಾಚಿಕೆಯಾಗಬೇಕು ಎಂಬುದಾಗಿ .ಈಶ್ವರಪ್ಪ ಹೇಳಿದ್ದಾರೆ.