ನವದೆಹಲಿ, ಅ. 03(DaijiworldNews/PY): ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸುವ ನಿಟ್ಟಿನಲ್ಲಿ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಸಂಸ್ಥೆಯ ಅನುಮತಿಯನ್ನು ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬೋರೇಟರಿಯವರು ಅನುಮತಿ ಕೇಳಿದ್ದಾರೆ.
ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ಔಷಧ ಸಂಸ್ಥೆ ಅನುಮತಿ ಕಲ್ಪಿಸಿದ್ದಲ್ಲಿ, ರೆಡ್ಡಿ ಲ್ಯಾಬೋರೇಟರಿಗೆ ಸುಮಾರು ಹತ್ತು ಕೋಟಿ ಡೋಸೇಜ್ಗಳಷ್ಟು ಲಸಿಕೆಗಳನ್ನು ನೀಡುವುದಾಗಿ ಕಳೆದ ತಿಂಗಳು ಆರ್ಡಿಎಫ್ಐ ಹೇಳಿತ್ತು.
ರೆಡ್ಡೀಸ್ ಲ್ಯಾಬೋರೇಟರಿಯವರು, ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗಾಗಿ ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದು, ಸಂಸ್ಥೆ ಕ್ಲಿನಿಕಲ್ ಟ್ರಯಲ್ಗೆ ಅನುಮೋದನೆ ನೀಡುವ ಮೊದಲು ಅರ್ಜಿಯಲ್ಲಿನ ತಾಂತ್ರಿಕ ಅಂಶಗಳನ್ನು ಪರಿಶೀಲನೆ ಮಾಡಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಸೆ.1ರಿಂದ ರಷ್ಯಾದಲ್ಲಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿದ್ದು, ಈ ಕ್ಲಿನಿಕಲ್ ಟ್ರಯಲ್ಗೆ ಸುಮಾವರು 40 ಸಾವಿರ ಸ್ವಯಂ ಸೇವಕರು ಒಳಪಡುತ್ತಿದ್ದಾರೆ.