ಬಿಜಾಪುರ, ಅ. 03(DaijiworldNews/PY): ಬಿಜಾಪುರ ಜಿಲ್ಲೆಯಲ್ಲಿ ನಡೆದ ಹಲವಾರು ಹತ್ಯೆಗಳ ಹಿಂದೆ ಇದ್ದ ಹಿರಿಯ ಮಾವೋವಾದಿ ಮುಖಂಡನನ್ನು ಅವರ ತಂಡದ ಕಾರ್ಯಕರ್ತರು ಹತ್ಯೆಗೈದಿದ್ದಾರೆ.
ಹತ್ಯೆಯಾದ ಮಾವೋವಾದಿಯನ್ನು ಬಿಜಾಪುರ ಜಿಲ್ಲೆಯ ವಿಭಾಗೀಯ ಸದಸ್ಯ ಮೋಡಿಯಂ ವಿಜ್ಜಾ ಎನ್ನಲಾಗಿದೆ.
ವಿಜ್ಜಾನನ್ನು ಗಂಗಲೂರು ಪ್ರದೇಶ ಸಮಿತಿಯ ಕಾರ್ಯಕರ್ತರೇ ಹತ್ಯೆ ಮಾಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ ಎಂದು ಛತ್ತೀಸಗಡದ ಬಸ್ತಾರ್ ಪ್ರದೇಶದ ಐಜಿಪಿ ಪಿ. ಸುಂದರ್ರಾಜ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಸ್ತಾರ್ ಪ್ರದೇಶದಲ್ಲಿ ನಡೆಯುತ್ತಿರುವ ನಾಗರಿಕ ಹತ್ಯೆಗಳ ಹಿನ್ನೆಲೆ, ಈತನ ಹತ್ಯೆಯ ಘಟನೆ ಪ್ರಮುಖವಾದ ಬೆಳವಣಿಗೆಯಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಮೋಡಿಯಂ ವಿಜ್ಜಾ ಎಂಬಾತ ಗಂಗಲೂರು ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳಿಗೆ ಕಾರಣನಾಗಿದ್ದ. ಹಾಗಾಗಿ ಈತನ ಪತ್ತೆ ಮಾಡುವವರಿಗೆ 8 ಲಕ್ಷ.ರೂ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಲಾಗಿತ್ತು.