ಬೆಂಗಳೂರು, ಅ. 03(DaijiworldNews/PY): ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಶನಿವಾರ ಭೇಟಿಯಾದರು.
ಭೇಟಿಯ ಸಂದರ್ಭ ಹೆಚ್ಡಿಕೆ ಅವರು ಹಟ್ನಾ, ಗೊಲ್ಲರಹಟ್ಟಿ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನು ಸ್ವಾಧೀನ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೆಐಎಡಿಬಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸುಮಾರು 500 ಎಕರೆ ಒಣಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈತರಿಗೆ ಯಾವುದೇ ರಿತಿಯ ತೊಂದರೆ ಹಾಗೂ ಅನ್ಯಾಯವಾಗದಂತೆ ಸೂಕ್ತವಾದ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಸುಮಾರು 700ಕ್ಕೂ ಅಧಿಕ ಎಕರೆ ನೀರಾವರಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ಬಿಡಲು ಒತ್ತಾಯಿಸಿ ಅಗತ್ಯವಾದ ಸಲಹೆ ನೀಡಿದರು.