ಒಡಿಶಾ, ಅ. 03 (DaijiworldNews/MB) : ಭಾರತ ಮೊಟ್ಟಮೊದಲ ಬಳಕೆ ಪ್ರಯೋಗ ದೇಸೀ ನಿರ್ಮಿತ, ಅತ್ಯಾಧುನಿಕ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ 'ಶೌರ್ಯ' ಉಡಾವಣೆ ಯಶಸ್ವಿಯಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಈ ಉಡಾವಣಾ ಕ್ಷಿಪಣಿಯನ್ನು ಶನಿವಾರ ಒಡಿಶಾ ತೀರದಿಂದ ಉಡಾಯಿಸಲಾಗಿದ್ದು ಇದು ಬಳಕೆದಾರ ಸರಣಿಯಲ್ಲಿ ಮೊದಲ ಪ್ರಯೋಗವಾಗಿದೆ. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ನೆಗೆಯುವ ಸಾಮರ್ಥ್ಯವಿರುವ ಮಧ್ಯಮ ಶ್ರೇಣಿಯ ಹೈಬ್ರಿಡ್ ಕ್ಷಿಪಣಿ ಇದಾಗಿದೆ.
ಶನಿವಾರ ಮಧ್ಯಾಹ್ನ 12:10ಕ್ಕೆ ಪರೀಕ್ಷಾರ್ಥ ಉಡಾವಣೆಯನ್ನು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ನಡೆಸಲಾಗಿದೆ. ಈ ಕ್ಷಿಪಣಿಯನ್ನು ಬಹುಉಪಯೋಗಿ ಅತ್ಯಾಧುನಿಕ ಕಂಪ್ಯೂಟಿಂಗ್ ಟೆಕ್ನಾಲಜಿಯೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು ಇದು ನಿಖರವಾದ ಸಂಚಾರ ಸಾಮರ್ಥ್ಯ, ಪರಿಣಾಮಕಾರಿ ಪ್ರೊಪಲ್ಷನ್, ಅತ್ಯಾಧುನಿಕ ನಿಯಂತ್ರಣ ಮತ್ತು ಮಾರ್ಗದರ್ಶನ ವ್ಯವಸ್ಥೆಗಳನ್ನು ಒಳಗೊಂಡಿದೆ.