ಕೊಪ್ಪಳ, ಅ. 03(DaijiworldNews/PY): ಮನುಷ್ಯರೆಂದರೆ ನಶೆಗೆ ದಾಸನಾಗುವುದು ಸಹಜ. ಪ್ರತಿಯೋರ್ವ ಮನುಷ್ಯನಿಗೂ ಡ್ರಗ್ಸ್ನ ಅಗತ್ಯವಿದೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಶೆ ಮಾಡುವ ಪದ್ದತಿ ಹಿಂದೆ ರಾಜಮಹಾರಾಜರ ಕಾಲದಿಂದಲೂ ಬಂದ ಪದ್ದತಿ. ಪ್ರಸ್ತುತ ಬೇರೆ ಬೇರೆ ವಿಧದ ನಶೆ ಮಾಡುವ ವಸ್ತುಗಳನ್ನು ಕಂಡು ಹಿಡಿದಿದ್ದಾರೆ. ಸಿನಿಮಾ ನಟ-ನಟಿಯರು ಡ್ರಗ್ಸ್ ಅನ್ನು ಹೆಚ್ಚು ಉಪಯೋಗ ಮಾಡುವುದು ತಪ್ಪು ಎಂದು ತಿಳಿಸಿದರು.
ನಟಿಯರು ಈ ದಂಧೆಯಲ್ಲಿ ತೊಡಗಿದ್ದು ತಪ್ಪು. ಈ ವಿಚಾರವನ್ನು ಯಾವುದೇ ಮಾಧ್ಯಮದವರು ಪ್ರಸಾರ ಮಾಡಬಾರದು ಬದಲಾಗಿ ಅವರಿಗೆ ಗೌಪ್ಯವಾದ ಶಿಕ್ಷೆ ನೀಡಬೇಕು ಎಂದರು.
ನಾನು ಯಾವ ಕ್ಲಬ್ಗೂ ಕೂಡಾ ಹೋಗುವವನಲ್ಲ. ಅಲ್ಲದೇ ಅಫೀಮು, ಸಿಗರೇಟು ಸೇದುವವನಲ್ಲ. ಇನ್ನು ರಾಜಕಾರಣಿಗಳು ಕೂಡಾ ವೈಯುಕ್ತಿಕವಾಗಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಈಗ ಡ್ರಗ್ಸ್ ವಿಚಾರದಲ್ಲಿ ಜಾಗೃತಿ ಬಂದಿದೆ ಎಂದರು.