ಪಾಟ್ನಾ, ಅ. 03(DaijiworldNews/PY): ಬಹುಜನ ಸಮಾಜ ಪಕ್ಷದ ಬಿಹಾರ ರಾಜ್ಯಾಧ್ಯಕ್ಷ ಭಾರತ್ ಬಿಂದ್ ಅವರು ಬಿಎಸ್ಪಿ ಪಕ್ಷ ತೊರೆದು ಆರ್ಜೆಡಿಗೆ ಸೇರ್ಪಡೆಗೊಂಡಿದ್ದಾರೆ.
ಭಾರತ್ ಬಿಂದ್ ಅವರು ಬಿಎಸ್ಪಿ ಪಕ್ಷ ತ್ಯಜಿಸಿ ಆರ್ಜೆಡಿ ಸೇರ್ಪಡೆಗೊಂಡಿರುವ ಕಾರಣ ಬಿಎಸ್ಗೆ ತೀವ್ರವಾದ ಹಿನ್ನಡೆಯಾಗಿದೆ.
ಭಾರತ್ ಬಿಂದ್ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಫೋಟೊವೊಂದನ್ನು ಆರ್ಜೆಡಿ ಮುಖಂಡ ತೇಜಶ್ವಿ ಯಾದವ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಹುಜನ ಸಮಾಜ ಪಕ್ಷದ ಬಿಹಾರದ ಅಧ್ಯಕ್ಷರು ಬಿಹಾರವನ್ನು ನಿರ್ಮಾಣ ಮಾಡಲು ಹಾಗೂ ಯುವ ವಿರೋಧಿ ಎನ್ಡಿಎಯನ್ನು ತೆಗೆದುಹಾಕಲು ಬೆಂಬಲ ನೀಡಲು ನಮ್ಮೊಂದಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.